ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅದ್ದೂರಿ ಸಿನಿಮಾದ ಮುಖಾಂತರ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ರು.. ಅದಾದ ನಂತರ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟು ಸೈ ಎನಿಸಿಕೊಂಡಿರುವ ಧ್ರುವ ಸರ್ಜಾ.. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಈಗ ಆ ಅಭಿಮಾನಿ ವರ್ಗಕ್ಕೊಂದು ಗುಡ್ ನ್ಯೂಸ್ ಸಿಕ್ಕಿದೆ..
ಹೌದು .. ಅಕ್ಟೋಬರ್ 5 ಧ್ರುವ ಸರ್ಜಾ ಅವರು ಹುಟ್ಟಿದ ದಿನ. ಕಳೆದ ಮೂರು ವರ್ಷಗಳಿಂದ ಧ್ರುವ ಸರ್ಜಾ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿರಲಿಲ್ಲ. ಇದಕ್ಕೆ ಕಾರಣ ತನ್ನ ಮುದ್ದಿನ ಅಣ್ಣನ ನಿಧನ. ಇದರಿಂದ ಧ್ರುವ ಸರ್ಜಾ ಅಭಿಮಾನಿಗಳಿಗೆ ಹುಟ್ಟಿದ ಹಬ್ಬದ ದಿನ ಅವರು ಸಿಕ್ಕಿರಲಿಲ್ಲ. ಆದರೆ ಈ ವರ್ಷ ಧ್ರುವ ಸರ್ಜಾ ಅವರ ಅಭಿಮಾನಿ ಬಳಗ. ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ನಿರ್ಧರಿಸಿದೆ.

ಹೌದು .. ಅಕ್ಟೋಬರ್ 5 ನೇ ತಾರೀಕು ಧ್ರುವ ಸರ್ಜಾ ಅವರ ಮನೆಯ ಬಳಿ.. ರಾತ್ರಿ 11 ಗಂಟೆಯಿಂದಲೇ ಹುಟ್ಟು ಹಬ್ಬದ ಆಚರಣೆ ಶುರುವಾಗಲಿದೆ. ಆ ದಿನ ಎಲ್ಲಾ ಅಭಿಮಾನಿಗಳಿಗೂ ಧ್ರುವ ಸರ್ಜಾ ಸಿಗುತ್ತಾರೆ, ಮಾತನಾಡಿಸುತ್ತಾರೆ, ಆದರೆ ಅವರನ್ನು ನೋಡಲು ಹಾಗೂ ಅವರ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಂದ ಅಭಿಮಾನಿಗಳು ಯಾವುದೇ ರೀತಿಯ ಕೇಕ್ ಗಳು ಅಥವಾ ಹೂಗುಚ್ಛಗಳು ಉಡುಗೊರೆಗಳನ್ನು ತರದೆ, ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳು, ಲೇಖನಿ ಗಳನ್ನು ತರಲು ಅವರ ಅಭಿಮಾನಿ ಬಳಗವೊಂದು ವಿನಂತಿಸಿದೆ. ಆಚರಣೆ ಎಲ್ಲಾ ಮುಗಿದ ನಂತರ ನೇರವಾಗಿ ಶಾಲಾ ಮಕ್ಕಳಿಗೆ ಆ ಪುಸ್ತಕಗಳು ಲೇಖನಿಗಳನ್ನು ತಲುಪಿಸುವುದಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ಈ ವರ್ಷದ ದ್ರುವ ಸರ್ಜಾ ಅವರ ಹುಟ್ಟುಹಬ್ಬ ತುಂಬಾ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಜರುಗಲಿದೆ.
ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.