ಟೀಸರ್ ಮೂಲಕವೇ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾ ನಿರ್ಮಾಪಕರ ಸಾವಿನಿಂದಾಗಿ ಸ್ಥಗಿತಗೊಂಡಿತ್ತು…ಟೀಸರ್ ನೋಡಿ ಮೆಚ್ಚಿದ್ದ ಪ್ರೇಕ್ಷಕರು ಅಯ್ಯೋ ಇಂಥದೊಂದು ಒಳ್ಳೆ ಸಿನಿಮಾ ನಿಂತೋಯ್ತಲ್ಲ ಅಂತ ಬೇಜಾರ್ ಆಗಿದ್ರು…ಆದ್ರೆ ಈಗ ಗ್ರಾಮಾಯಣ ತಂಡದಿಂದ ಸಿಹಿ ಸುದ್ದಿ ಸಿಕ್ಕಿದೆ… ವಿನಯ್ ರಾಜ್‌ಕುಮಾರ್ ಅವರ ‘ಗ್ರಾಮಾಯಣ’ ಮತ್ತೆ ಜೀವ ಪಡೆದುಕೊಂಡಿದೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕಲಾವಿದರ ಸಂಘದ ಸಭಾಂಗಣದಲ್ಲಿ ‘ಗ್ರಾಮಾಯಣ’ ಆರಂಭಗೊಂಡಿದ್ದು, ಶಿವರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು.
ಆದರೆ, ನಿರ್ಮಾಪಕ ಎಸ್‌ಎಲ್‌ಎನ್ ಮೂರ್ತಿ ಅವರ ಅಕಾಲಿಕ ಮರಣದಿಂದ ಸಿನಿಮಾ ಅರ್ಧಕ್ಕೆ ನಿಂತಿತ್ತು. ಆದ್ರೆ ಈಗ ಗ್ರಾಮಾಯಣ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲು ನಿರ್ಧಾರ ಮಾಡಿದ್ದಾರೆ ಮನೋಹರ್ ನಾಯ್ಡು ಮತ್ತು ಕೆ ಪಿ ಶ್ರೀಕಾಂತ್…

ಲಹರಿ ಫಿಲಂಸ್‌ನ ಮನೋಹರ್ ನಾಯ್ಡು ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆಪಿ ಶ್ರೀಕಾಂತ್ ಪ್ರಸ್ತುತ ಉಪೇಂದ್ರ ಅವರ ‘ಯುಐ’ ಅನ್ನು ನಿರ್ಮಿಸುತ್ತಿದ್ದಾರೆ. ಈಗ ‘ಗ್ರಾಮಾಯಣ’ ಚಿತ್ರವನ್ನ ಎರಡೂ ನಿರ್ಮಾಣ ಸಂಸ್ಥೆ ಸೇರಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ…ಇಂಥದೊಂದು ಒಳ್ಳೆಯ ಕಥೆ ಕೆಪಿ ಶ್ರೀಕಾಂತ್ ಕೈ ಸೇರಿರೋದು ಚಿತ್ರತಂಡಕ್ಕೆ ಹಾಗೂ ವಿನಯ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ….ಅಂದ್ಹಾಗೆ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗುರುವಾರ (ಜೂನ್ 08) ಮತ್ತೆ ‘ಗ್ರಾಮಾಯಣ’ ಆರಂಭವಾಗಲಿದೆ. ಹೊಸ ತಂಡದೊಂದಿಗೆ ದೇವನೂರು ಚಂದ್ರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ…ವಿನಯ್ ಅವ್ರನ್ನ ಹೊಸ ರೀತಿಯಲ್ಲಿ ಈ ಸಿನಿಮಾ ಮೂಲಕ ನೋಡೋದು ಗ್ಯಾರೆಂಟಿ ಆಗಿದೆ….