ವೀರಂ….. ಪ್ರಜ್ವಲ್ ದೇವರಾಜ್ ಅಭಿನಯದ ಆಕ್ಷನ್ ಕಮರ್ಷಿಯಲ್ ಸಿನಿಮಾ.. ಚಿತ್ರದಲ್ಲಿ ಪ್ರಜ್ವಲ್ ಜೊತೆಯಲ್ಲಿ ಇದೆ ಮೊದಲ ಬಾರಿಗೆ ನಟಿ ಶೃತಿ, ಶಿಷ್ಯ ದೀಪಕ್, ಶ್ರೀನಗರ ಕಿಟ್ಟಿ, ರಚಿತಾ ರಾಮ್ ಅಭಿನಯ ಮಾಡಿದ್ದಾರೆ…
ವೀರಂ ಪ್ರಜ್ವಲ್ ಅವರ ಕೆರಿಯರ್ ನಲ್ಲಿ ವಿಭಿನ್ನ ಸಿನಿಮಾ ಅಂತ ಏನು ಅನ್ನಿಸುವುದಿಲ್ಲ… ಯಾಕೆಂದರೆ ಪ್ರಜ್ವಲ್ ಈಗಾಗಲೇ ಈ ರೀತಿಯ ಬಹುತೇಕ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ… ಒಬ್ಬ ಅಕ್ಕ ತನ್ನ ತಮ್ಮಂದಿರಗಾಗಿ ತಾನು ಕೂಡ ತಾಯಿಯಾಗದೆ ಅವರ ಹೇಳಿಗೆಗಾಗಿ ಶ್ರಮಿಸುತ್ತಾ ತಮ್ಮಂದಿರನ್ನು ಪ್ರೀತಿಸುತ್ತಾ ಜೀವನ ಸಾಗಿಸುವುದೇ ವೀರಂ ಚಿತ್ರದ ಒಂದು ಲೈನ್ ಸ್ಟೋರಿ..
ಚಿತ್ರದಲ್ಲಿ ಶ್ರುತಿ ಅವರ ಸಹೋದರರಾಗಿ ಪ್ರಜ್ವಲ್ ಹಾಗೂ ಶ್ರೀನಗರ ಕಿಟ್ಟಿ ಅಭಿನಯಿಸಿದ್ದರೂ ಚಿತ್ರದುದ್ದಕ್ಕೂ ಶ್ರೀನಗರ ಕಿಟ್ಟಿ ಶ್ರುತಿ ಅವರಿಂದ ದೂರವೇ ಉಳಿಯುತ್ತಾರೆ. ಇನ್ನು ಪ್ರಜ್ವಲ್ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡಿದ್ದು ನಂತರ ಮಾಫಿಯಾ ಗ್ಯಾಂಗಿಗೆ ಹೇಗೆ ಎಂಟ್ರಿ ಆಗುತ್ತಾರೆ ಅನ್ನೋದೇ ಸಿನಿಮಾದ ಇಂಟ್ರೆಸ್ಟಿಂಗ್ ಸ್ಟೋರಿ ಲೈನ್…ಚಿತ್ರದಲ್ಲಿ ಪ್ರಜ್ವಲ್ಹಾಗೂ ರಚಿತಾ ರಾಮ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.. ರಚಿತಾ ಹಾಗೂ ಪ್ರಜ್ವಲ್ ಸೀನ್ ಗಳು ಕೆಲವೇ ಕೆಲವು ಇದ್ದರೂ ಕೂಡ ಇಬ್ಬರ ಜೋಡಿ ಸಖತ್ತಾಗಿ ಕಾಣುತ್ತೆ… ಸಿನಿಮಾದ ಹಾಡುಗಳು ಕೂಡ ಚೆನ್ನಾಗಿ ಮೂಡಿ ಬಂದಿದ್ದು ಎಮೋಷನಲ್ ಸಾಂಗ್ ಒಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತೆ…ಇನ್ನು ಶ್ರುತಿ ಮತ್ತು ಪ್ರಜ್ವಲ್ ಎಮೋಷನಲ್ ಸೀನ್ ಗಳಲ್ಲಿ ಫುಲ್ ಮಾರ್ಕ್ಸ್ ಪಡೆಯುತ್ತಾರೆ…
ಜೇಡ ಪಾತ್ರದಲ್ಲಿ ಶಿಷ್ಯ ದೀಪಕ್ ತುಂಬಾ ಚೆನ್ನಾಗಿ ನಟಿಸಿದ್ದಾರೆ.. ಕಂಬ್ಯಾಕ್ ಸಿನಿಮಾ ಅನ್ನೋದು ತಲೆಯಲ್ಲಿಟ್ಟುಕೊಂಡೇ ನಿರ್ದೇಶಕ ಖದರ್ ಕುಮಾರ್, ದೀಪಕ್ ಅವರಿಗೆ ವಿಶೇಷವಾದ ಸೀನ್ಗಳನ್ನ ಕಂಪೋಸ್ ಮಾಡಿದಂತಿದೆ…ಇನ್ನು ಜೇಡ ಎಂಟ್ರಿಗೆ ಬ್ಯಾಗ್ರೌಂಡ್ ಸ್ಕೋರ್ ಕೂಡ ಚೆನ್ನಾಗಿ ಮೂಡಿ ಬಂದಿದೆ…ಚಿತ್ರದಲ್ಲಿ ವಿಷ್ಣು ದಾದಾ ಅವರ ಅಭಿಮಾನಿಯಾಗಿ ಶ್ರುತಿ ಹಾಗೂ ಪ್ರಜ್ವಲ್ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ ವಿಷ್ಣುವರ್ಧನ್ ಗೆ ಬಂದು ಹೋಗ್ತಾರ ? ಅಥವಾ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಅನ್ನೋದನ್ನ ಚಿತ್ರದ ಸಸ್ಪೆನ್ಸ್ ಪಾರ್ಟ್… ಟೆಕ್ನಿಕಲಿಯಾಗಿ ಸಿನಿಮಾ ಮೇಕಿಂಗ್ ಚೆನ್ನಾಗಿ ಮೂಡಿ ಬಂದಿದೆ.. ನಿರ್ದೇಶಕರು ತಮ್ಮ ಮೊದಲ ಸಿನಿಮಾದಲ್ಲಿ ತಮ್ಮ ಕೈಲಾದಷ್ಟು ಕೆಲಸ ಮಾಡಿದ್ದು ಸ್ಕ್ರೀನ್ ಪ್ಲೇ ಮತ್ತಷ್ಟು ಶ್ರಮ ವಹಿಸಿದ್ದರೆ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಇನ್ನೂ ಅದ್ಭುತವಾಗಿ ಮೂಡಿ ಬರ್ತಿತ್ತು ಅನ್ನೋದು ಪ್ರೇಕ್ಷಕರ ಅಭಿಪ್ರಾಯ… ವೀರಂ ಆಕ್ಷನ್, ಮಾಸ್, ಎಮೋಷನಲ್ ಎಲ್ಲಾ ಎಲಿಮೆಂಟ್ಸ್ ಇರುವ ಚಿತ್ರವಾಗಿದ್ದರೂ ಕೂಡ ಅದ್ಯಾಕೋ ಪ್ರಜ್ವಲ್ ಕಥೆಯ ಆಯ್ಕೆಯಲ್ಲಿ ಎಡವುತಿದ್ದಾರೆ ಅನ್ನೋ ಅನುಮಾನ ಪ್ರೇಕ್ಷಕರಿಗೆ ಮೂಡುತ್ತದೆ…