ಮೊಗ್ಗಿನ ಮನಸ್ಸಿನ’ ಹುಡುಗಿ ರಾಧಿಕಾ ಪಂಡಿತ್ ಈಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಆಗಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಹುಡುಗಿ ರಾಧಿಕಾ ಪಂಡಿತ್, ಕೊನೆಯದಾಗಿ ʻಆದಿಲಕ್ಷ್ಮಿ ಪುರಾಣʼ ಚಿತ್ರದಲ್ಲಿ ಕಾಣಿಸಿಕೊಂಡ್ರು. ಪತಿ ಯಶ್, ಸಂಸಾರ ಮಕ್ಕಳು ಅಂತಾ ಫುಲ್ ಟೈಮ್ ಬ್ಯುಸಿಯಾಗಿ ಬಿಟ್ಟರು. ಈಗ ಮತ್ತೆ ಸಿನಿಮಾಗೆ ರೀ ಎಂಟ್ರಿ ಕೊಡ್ತಿದ್ದಾರೆ.

ಮದುವೆಯಾಗಿ ಇಬ್ಬರ ಮಕ್ಕಳ ತಾಯಿಯಾಗಿದ್ದರೂ ಕೊಂಚವೂ ರಾಧಿಕಾ ಅವರ ಗ್ಲ್ಯಾಮರ್ ಕಮ್ಮಿಯಾಗಿಲ್ಲ. ನಟನೆ ಗ್ರಾಮರ್ ಚೆನ್ನಾಗಿಯೇ ಅರಿತಿರೋ ರಾಧಿಕಾ ಎಂಟ್ರಿಗೆ ಸಮಸ್ತ ಕರ್ನಾಟಕವೇ ಕಾದು ಕೂತಿದೆ. ಹೀಗಿರುವಾಗ ಅಭಿಮಾನಿಗಳ ಆಸೆಯಂತೆ ಪವರ್‌ಫುಲ್ ಕಥೆಯ ಮೂಲಕ ಯಶ್ ಪತ್ನಿ ಕಮ್‌ಬ್ಯಾಕ್ ಆಗಲು ತಯಾರಿ ನಡೆಸುತ್ತಿದ್ದಾರೆ.
ಅದ್ದೂರಿ ಎಂಟ್ರಿಗೆ ರಾಧಿಕಾ, ಹೊಸ ಕಥೆ ಬಗೆಯ ಕಥೆಯನ್ನ ಕೇಳ್ತಿದ್ದಾರೆ. ಸ್ತ್ರಿ ಪ್ರಧಾನ ಪಾತ್ರಗಳ ಮೂಲಕ ಕಮ್‌ಬ್ಯಾಕ್ ಆದ್ರೂ ಆಶ್ವರ್ಯವಿಲ್ಲ ಅಂತಿದ್ದಾರೆ ಗಾಂಧಿನಗರದ ಮಂದಿ. ಹಾಗಾದರೆ ಯಾವ ಸಿನಿಮಾ, ಯಾವ ತರಹದ ಪಾತ್ರ ಎಂಬುದನ್ನ ಸದ್ಯದಲ್ಲೇ ರಿವೀಲ್ ಆಗಲಿದೆ.






ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.