ವಿಭಿನ್ನ ಕಥೆಯ “ರಾವೆನ್” ಆರಂಭ ಕನ್ನಡದಲ್ಲೊಂದು “ಕಾಗೆ” ಕುರಿತಾದ ಚಿತ್ರ

0
38

ವಿಶ್ವ ಪ್ರೊಡಕ್ಷನ್ಸ್ ಹಾಗೂ ಆತ್ಮ ಸಿನಿಮಾಸ್ ಲಾಂಛನದಲ್ಲಿ
ವಿಶ್ವನಾಥ್.ಜಿ.ಪಿ ಹಾಗೂ ಪ್ರಬಿಕ್ ಮೊಗವೀರ್ ಅವರು ನಿರ್ಮಿಸುತ್ತಿರುವ ಹಾಗೂ ವೇದ್ ನಿರ್ದೇಶನದ “ರಾವೆನ್” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಾಸಕ ಗೋಪಲಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ದೇಶಕ ಎಂ.ಡಿ.ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

“ರಾವೆನ್” ಎಂದರೆ ಕಾಗೆಯ ಹೆಸರು.
ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂರಬಾರದು ಮುಂತಾದ ನಂಬಿಕೆಗಳು ರೂಡಿಯಲ್ಲಿದೆ.‌ ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಈ ತಿಂಗಳ 21ರಿಂದ ಚಿತ್ರೀಕರಣ ಆರಂಭವಾಗಲಿದೆ. ದಿಲೀಪ್ ಪೈ ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ್, ಕುಂಕುಮ ನಾಯಕಿಯರು. ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ಶ್ರೇಯಾ ಆರಾಧ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಎಂ.ಡಿ.ಶ್ರೀಧರ್ ಅವರು ಸೇರಿದಂತೆ ಅನೇಕರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಿರ್ದೇಶಕ ವೇದ್.

ನಾನು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, ವೇದ್ ಅವರು ಮಾಡಿಕೊಂಡಿರುವ ಕಥೆ ಇಷ್ಟವಾಯಿತು. ಹಾಗಾಗಿ ಪ್ರಬಿಕ್ ಮೊಗವೀರ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬದ ದಿನವೇ ಚಿತ್ರ ಆರಂಭವಾಗಿರುವುದು ಖುಷಿಯಾಗಿದೆ ಎಂದರು.

ಮತ್ತೊಬ್ಬ ನಿರ್ಮಪಕರಾದ ಪ್ರಬಿಕ್ ಮೊಗವೀರ್ ಮಾತನಾಡುತ್ತಾ, ನಾನು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸಾಕಷ್ಟು ಪ್ರಾಣಿಗಳ ಕುರಿತಾದ ಚಿತ್ರವನ್ನೇ ಮಾಡಿದ್ದೇನೆ. ಈ ಚಿತ್ರ ಕೂಡ ಕಾಗೆಯ ಬಗ್ಗೆ ಇದೆ‌ ಎಂದು ತಿಳಿಸಿದರು‌.

ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ.‌ ಒಳ್ಳೆಯ ಪಾತ್ರ. ಕಾಗೆ ಶನಿಮಹಾತ್ಮನ ವಾಹನ. ಅಂಥಹ ಕಾಗೆ ಕುರಿತಾದ ಚಿತ್ರವಿದು. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಗೆಯ ಜೊತೆ ಕನೆಕ್ಟ್ ಆಗುತ್ತದೆ ಎಂದರು ನಾಯಕ ದಿಲೀಪ್ ಪೈ.

ಚಿತ್ರದ ನಾಯಕಿಯರಾದ ಸ್ವಪ್ನ ಶೆಟ್ಟಿಗಾರ್, ಕುಂಕುಮ್ , ಸಂಗೀತ ನಿರ್ದೇಶಕ ಕ್ರಿಸ್ಟಫರ್ ಹಾಗೂ ಛಾಯಾಗ್ರಾಹಕ ಆರ್ ಸಿ ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು .

ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.

Instagram : https://instagram.com/kannada_pichhar?igshid=YmMyMTA2M2Y=

Youtube https://youtube.com/@KannadaPichhar

Facebook : https://www.facebook.com/KannadaPichhar?mibextid=ZbWKwL

ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

How awesome is this?

LEAVE A REPLY

Please enter your comment!
Please enter your name here