ಇತ್ತೀಚಿಗೆ ಸ್ಯಾಂಡಲ್ವುಡ್ ನಲ್ಲಿ ಬೇರೆ ಎಲ್ಲಾ ಚಿತ್ರರಂಗಗಳು ತಿರುಗಿ ನೋಡುವಂತಹ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಕೆಜಿಎಫ್ ಕಾಂತಾರಾ ದಂತಹ ದೈತ್ಯ ಸಿನಿಮಾಗಳ ಹೆಮ್ಮೆ ಕನ್ನಡದ್ದು. ಕನ್ನಡದ ಸ್ಟಾರ್ ನಟರುಗಳ ಸಾಲು ಸಾಲು ಸಿನಿಮಾಗಳು ಕನ್ನಡ ಸಿನಿ ರಸಿಕರ ಎದೆಯಲ್ಲಿ ಸಂತಸದ ಹೂಗುಚ್ಛವನ್ನು ನೆಟ್ಟಿದೆ.
ಸೆಪ್ಟೆಂಬರ್ 18 ಕ್ಕೆ ಕನ್ನಡ ಚಿತ್ರಗಳ ಸಾಲು ಸಾಲು ಅನೌನ್ಸ್ಮೆಂಟ್ ಗಳು ಹೊರಬೀಳಲಿದೆ. ಸ್ಯಾಂಡಲ್ ವುಡ್ ನ ಬಹುತೇಕ ನಟರುಗಳ ಸಿನಿಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ತೆರೆದ ಕಣ್ಣಿನಲ್ಲಿ ಕುಳಿತು ಕಾತುರತೆಯಿಂದ ಕಾಯುವಾಗ ಸೆಪ್ಟೆಂಬರ್ 18.. ಈ ಎಲ್ಲಾ ಕುತೂಹಲಕ್ಕೆ ಪುಷ್ಠಿ ತುಂಬಲಿದೆ.
ಇಷ್ಟೇ ಅಲ್ಲದೆ ಈ ದಿನ ವಿಷ್ಣುವರ್ಧನ್, ಉಪೇಂದ್ರ,ಶ್ರುತಿ ಅವರು ಹುಟ್ಟಿದ ದಿನ ಕೂಡ ಹೌದು.

ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಸಂಭ್ರಮದ ಜೊತೆ ತಮ್ಮ ಬಹು ನಿರೀಕ್ಷಿತ ಚಿತ್ರ UI ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗುವ ದಿನ.
ಇನ್ನೊಂದು ಕಡೆ ದರ್ಶನ್ ಅಭಿನಯದ ಕಾಟೇರಾ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿ, ಸೆಪ್ಟೆಂಬರ್ 18ಕ್ಕೆ ಟೀಸರ್ ಕೂಡ ರಿಲೀಸ್ ಆಗುವ ಅನೌನ್ಸ್ಮೆಂಟ್ ಹೊರ ಬಿದ್ದಿದೆ. ತರುಣ್ ಸುಧೀರ್ ಅವರ ನಿರ್ದೇಶನದ, ರಾಕ್ ಲೈನ್ ಪ್ರೊಡಕ್ಷನ್ ಅವರ ನಿರ್ಮಾಣದ ಈ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದರ ನಡುವೆ ಜೈಲರ್ ಸಿನಿಮಾದ ಮುಖಾಂತರ ಇಡೀ ಭಾರತದಲ್ಲಿ ಹವಾ ಸೃಷ್ಟಿ ಮಾಡಿರುವ ಶಿವಣ್ಣ ಅವರ ಬಹು ನಿರೀಕ್ಷಿತ ಘೋಸ್ಟ್ ಸಿನಿಮಾದ ಮೊದಲ ಹಾಡು ಸೆಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿದೆ.

ಇನ್ನು ದುನಿಯಾ ವಿಜಯ್ ಅವರ ಭೀಮ ಸಿನಿಮಾದ ಸೈಕ್ ಹಾಡು ಕೂಡ ಅದೇ ದಿನ ರಿಲೀಸ್ ಆಗಲಿದೆ.

ಇದೆಲ್ಲವನ್ನ ಮೀರಿ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದು ಅಭಿಮಾನಿಗಳ ತಲೆಯಲ್ಲಿ ಎಡಬಿಡದೆ ಕಾಡುತ್ತಿರುವ ಪ್ರಶ್ನೆ… ಈ ಪ್ರಶ್ನೆಗೂ ಕೂಡ ಸೆಪ್ಟೆಂಬರ್ 18 ಉತ್ತರವಾಗಲಿದೆ ಎಂಬುದು ಹಲವರ ಮಾತು.

ಒಟ್ಟಾರೆಯಾಗಿ ಈ ವರ್ಷದ ಸೆಪ್ಟೆಂಬರ್ 18 ಸ್ಯಾಂಡಲ್ ವುಡ್ನ ಸೈಕ್ ಡೇ ಆಗುವುದರಲ್ಲಿ ಎರಡು ಮಾತಿಲ್ಲ.
ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.