ಜುಲೈ 12 ರಂದು ತಮ್ಮ 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಶಿವಣ್ಣನಿಗೆ ಸಾಲು ಸಾಲು ಚಿತ್ರಗಳನ್ನು ಅನೌನ್ಸ್ ಮಾಡಿದ್ದಾರೆ. ಶಿವಣ್ಣಾನೇ ಹೇಳಿರೋ ಪ್ರಕಾರ ಇವರ ಕೈಯಲ್ಲಿ ಹತ್ತು, ಹನ್ನೆರಡು ಸಿನಿಮಾ ಇರೋದಂತೂ ಪಕ್ಕ ಅಂತೆ. ಹಾಗಾದ್ರೆ ಪ್ರತಿ 2 ರಿಂದ 3 ತಿಂಗಳಿಗೆ ಒಮ್ಮೆ, ಶಿವಣ್ಣನ ದೊಡ್ಡ ಸಿನಿಮಾವನ್ನು ನಾವು ನಿರೀಕ್ಷೆ ಮಾಡಬಹುದು.
ಇದರ ಪೈಕಿ ಘೋಸ್ಟ್ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಸಿನಿಮಾದ ಟೀಸರ್ ನೆನ್ನೆಯಷ್ಟೇ ಬಿಡುಗಡೆಯಾಗಿದ್ದು, ಬಿಗ್ ಡ್ಯಾಡಿ ಇಂಟ್ರೋ ವಿಡಿಯೋ ಸಕ್ಕತ್ ಸೌಂಡ್ ಮಾಡಿದೆ. ಇದರಲ್ಲಿ ಶಿವಣ್ಣ 3-4 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು,’ ಓಂ ‘ ಸಿನಿಮಾದ ಲುಕ್ ಕೂಡ ಬಂದು ಹೋಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾ ದಸರಾ ಗೆ ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ನಿರ್ದೇಶಕ ಶ್ರೀನಿ ಹೇಳಿದ್ದಾರೆ.
ಇನ್ನು ಮಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಮೊದಲನೇ ಬಾರಿಗೆ ನಿರ್ದೇಶನ ಮಾಡುತ್ತಿರುವ ’45’ ಎಂಬ ಚಿತ್ರವು ಕೂಡ ಶಿವಣ್ಣನಿಗೆ ಅನೌನ್ಸ್ ಆಗಿದೆ. ಈ ಚಿತ್ರ ವನ್ನು ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದು, ಶಿವಣ್ಣನ ಜೊತೆ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಕೂಡ ಇರಲಿದ್ದಾರೆ ಅನ್ನೋದು ವಿಶೇಷ. ಈ ಚಿತ್ರದ ಶೂಟಿಂಗ್ ಪ್ರಾರಂಭದ ಹಂತದಲ್ಲಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ , ಭಾಷೆಗಳಲ್ಲಿ ತೆರೆ ಕಾಣಲಿದೆ.


ಇನ್ನು ನಿರ್ದೇಶಕ ಲೋಹಿತ್ ಅವರು ಶಿವಣ್ಣನಿಗೆ ಒಂದು ಸಿನಿಮಾ ರೆಡಿ ಮಾಡ್ಕೊಂಡಿದ್ದಾರೆ. ಆ ಸಿನಿಮಾದ ಟೈಟಲ್ ಸತ್ಯಮಂಗಲ ಅನ್ನುವುದು ಫಿಕ್ಸ್ ಆಗಿದೆ. ಈ ಸಿನಿಮಾ ವನ್ನು ಕೃಷ್ಣ ಸಾರ್ಥಕವರೂ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಮೊದಲ ಪೋಸ್ಟರ್ ಶಿವಣ್ಣನ ಹುಟ್ಟುಹಬ್ಬದ ದಿನ ಬಿಡುಗಡೆಯಾಗಿದೆ. ಶಿವಣ್ಣನ ಒಂದು ಕಣ್ಣು ಮಾತ್ರ ಈ ಪೋಸ್ಟರ್ ನಲ್ಲಿ ಹೈಲೈಟ್ ಆಗಿದ್ದು ವೆರೈಟಿ ರೋಲ್ ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ‘ನರ್ತನ್ ‘ನಿರ್ದೇಶನ ಮಾಡುತ್ತಿರುವ ‘ಬೈರತಿ ರಣಗಲ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ, ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಮುಂಬರುವ ತಮಿಳು ಸಿನಿಮಾಗಳಲ್ಲಿ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ಜೈಲರ್. ನೆಲ್ಸನ್ ದಿಲೀಪ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವಣ್ಣ ನಟಿಸುತ್ತಿರುವುದು ವಿಶೇಷ. ಇನ್ನು ಮೋಹನ್ ಲಾಲ್ ಮತ್ತು ತಮನ್ನಾ ಭಾಟಿಯಾ ಕೂಡ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಲನಿತಿ ಮರಾನ್ ‘ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಆಗಸ್ಟ್ 10 ಕ್ಕೇ ಬಿಡುಗಡೆಯಾಗಲಿದೆ.



ಇನ್ನು ಶಿವಣ್ಣನ ಸೋದರ ಸಂಬಂಧಿ ಲಕ್ಕಿ ಗೋಪಾಲ್ ಅವರು ಒಂದು ಸಿನಿಮಾವನ್ನು ಶಿವಣ್ಣನಿಗೆ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾಗೆ ‘IV ರಿಟರ್ನ್ಸ್ ‘ ಎಂಬ ಹೆಸರಿಡಲಾಗಿದೆ. ಇನ್ಸ್ಪೆಕ್ಟರ್ ಲುಕ್ ನಲ್ಲಿ ಇರೋ ಶಿವಣ್ಣನ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಸಿನಿಮಾ 1989ರ ಶಿವಣ್ಣನ ‘ಇನ್ಸ್ಪೆಕ್ಟರ್ ವಿಕ್ರಂ’ ಎಂಬ ಸಿನಿಮಾದ ಸೀಕ್ವೆಲ್ ಆಗಿದೆ.


ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ಶಿವಣ್ಣನ ಒಂದು ವಿಶೇಷ ಸಿನಿಮಾ ಬರಲಿದೆ, ಅದುವೇ ‘ಕರಟಕ ದಮನಕ ‘ ಹಲವಾರು ವಿಭಿನ್ನ ಚಿತ್ರಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಯೋಗರಾಜ್ ಭಟ್, ಈ ಸಿನಿಮಾವನ್ನ ನಿರ್ದೇಶಿಸಲಿದ್ದಾರೆ. ಶಿವಣ್ಣನ ಜೊತೆ ಪ್ರಭುದೇವ್ ಕೂಡ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.


ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.