ಸ್ಯಾಂಡಲ್ವುಡ್ ಗೆ ಚಿಕ್ಕ ವಯಸ್ಸಿಗೆ ಕಾಲಿಟ್ಟ ಸುಧಾರಾಣಿ ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ ಆಳಿದ್ದು ಸುಳ್ಳಲ್ಲ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟು ಕನ್ನಡಿಗರ ಮನಸನ್ನ ಗೆದ್ದಿದಾರೆ.. ಇವರು 2000 ದ ಇಸವಿಯಲ್ಲಿ ಕುಟುಂಬದ ಆಪ್ತ ಹಾಗೂ ತಮಗೆ ಮಾನಸಿಕ ಧೈರ್ಯ ತುಂಬಿದ್ದ ಗೋವರ್ಧನ್ ಅವರನ್ನ ವಿವಾಹವಾಗುತ್ತಾರೆ. ಗೋವರ್ಧನ್ ಅವರನ್ನ ಮದುವೆ ಆಗಲು ನಾನು ಪುಣ್ಯ ಮಾಡಿದ್ದೆ ಅನ್ನುತಾರೆ ಸುಧಾರಾಣಿ.

ಇವರಿಗೆ 22 ವರ್ಷದ ಮುದ್ದಾದ ಮಗಳಿದ್ದಾಳೆ. ಅಮ್ಮನಂತೆ ಮಗಳು ಕೂಡ ಚುರುಕು, ಅಷ್ಟೇ ಲವಲವಿಕೆ..

ಸುಧಾರಾಣಿಗೆ ಮಗಳನ್ನ ಕಂಡರೆ ಹೆಚ್ಚು ಪ್ರೀತಿ.. ಮಗಳನ್ನ ಮುದ್ದಾಗಿ ಸುಧಾರಾಣಿ.. ಸುಬ್ಬಿ ಕುಟ್ಟಿ ಎನ್ನುತ್ತಾರೆ.ಸುಬ್ಬಿಕುಟ್ಟಿಗೆ ಶ್ವಾನ ಗಳೆಂದರೆ ಅಚ್ಚುಮೆಚ್ಚು.. ತಮ್ಮ ಮನೆಯಲ್ಲಿರುವ ಶ್ವಾನವನ್ನು ನಿಧಿ ತುಂಬಾ ಪ್ರೀತಿಯಿಂದ ಕಾಣುತ್ತಾರೆ. ಮಗುವಿನಂತೆ ಲಾಲಿಸುತ್ತಾರೆ.ಇವರಿಗೆ ನೃತ್ಯವೆಂದರೂ ಬಹಳ ಪ್ರೀತಿ.. ಭರತನಾಟ್ಯದಲ್ಲಿ ಇವರು ಪ್ರವೀಣೆ.. ಈಗಾಗಲೇ ರಂಗ ಪ್ರವೇಶವನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ ಇವರು ಶಿಕ್ಷಣದಲ್ಲೂ ಮುಂದು..ಸಂಗೀತದಲ್ಲೂ ಒಲವನ್ನು ಹೊಂದಿರುವ ಇವರು ಸಂಗೀತ ಸಾಧನಗಳನ್ನು ನುಡಿಸುತ್ತಾರೆ…

ಇಷ್ಟೆಲ್ಲ ಪ್ರತಿಭೆ ಹೊಂದಿರುವ ನಿಧಿ ಯಾಕಿನ್ನು ಚಿತ್ರರಂಗ ಪ್ರವೇಶ ಮಾಡಿಲ್ಲ ಎನ್ನುವುದು ಸುಧಾರಾಣಿ ಅವರ ಅಭಿಮಾನಿಗಳ ಮಾತು.. ಅಷ್ಟೇ ಅಲ್ಲದೆ ಅವರು ಚಿತ್ರರಂಗ ಪ್ರವೇಶ ಮಾಡುತ್ತಾರೆ ಎನ್ನುವ ಬಗ್ಗೆಯೂ ಮಾತುಗಳು ಕೇಳಿ ಬಂದಿದ್ದು.. ಆದರೆ ಅವರಿನ್ನೂ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.
ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.