ಈ ಭೂಮಿಯಲ್ಲಿ ಹುಟ್ಟಿದ ಮೇಲೆ.. ನಮ್ಮ ಹೆಸರಿನ ಮೇಲೆ ಒಂದು ಮನೆ ಮಾಡಬೇಕು.. ನಮ್ಮ ಕನಸಿನ ಮನೆ ನಮ್ಮಿಷ್ಟದ ಸ್ಥಳದಲ್ಲಿರಬೇಕು ಎಂಬುದು ಅನೇಕರ ಆಸೆ. ಬೆಂಗಳೂರಿನಂತಹ ನಗರದಲ್ಲಿ ಕನಸಿನ ಮನೆ ಮಾಡುವುದು ಸುಲಭದ ಕೆಲಸವಲ್ಲ ಹಾಗೂ ನಾವು ಚೂಸ್ ಮಾಡುವ ಪ್ರಾಪರ್ಟಿ ಮೇಲೆಯೂ ಸಾಕಷ್ಟು ನಿಗ ವಹಿಸಬೇಕಾಗುತ್ತದೆ.. ಇದರಿಂದ ಟಿವಿ 9 ಒಂದು ರಿಯಲ್ ಎಸ್ಟೇಟ್ ಎಕ್ಷ್ಪೋವನ್ನ ಆಯೋಜಿಸಿದೆ. ಎಲ್ಲಾ ಗ್ರಾಹಕರಿಗೆ ತಮ್ಮ ನಿರೀಕ್ಷೆಮಟ್ಟವನ್ನ ತಲುಪುವಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.
3 ದಿನಗಳ ಕಾಲ( ಸೆಪ್ಟೆಂಬರ್ 8,9,10) ,ನಡೆಯುವ tv9 ಆಯೋಜಿಸಿರುವ ಸ್ವೀಟ್ ಹೋಂ ಎಕ್ಸ್ ಪೊ ಬೆಂಗಳೂರು ನಗರದ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳು ಟೇಪ್ ಕತ್ತರಿಸುವ ಮುಖಾಂತರ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳು,ಹಾಗೂ ಫರ್ನಿಚರ್ ಕಂಪನಿ ಗಳು, ಗ್ರಾಹಕರು ಭಾಗವಹಿಸಿದ್ದರು. ಇದರ ಜೊತೆಯಲ್ಲಿ ಸ್ಯಾಂಡಲ್ವುಡ್ ನಟ ಕೋಮಲ್ , ಕೂಡ ಭಾಗವಹಿಸಿದ್ದು ವಿಶೇಷ.

ಈ ಬಾರಿ ರಿಯಲ್ ಎಸ್ಟೇಟ್ ಜೊತೆಗೆ ಫರ್ನಿಚರ್ ಎಕ್ಸ್ ಪೋ ಕೂಡ ಜರುಗುತ್ತಿರುವುದು ಇನ್ನೊಂದು ಖುಷಿಯ ವಿಚಾರ.ಪ್ರಾಪರ್ಟಿಯ ಜೊತೆಗೆ ಮನೆಗೆ ಬೇಕಾಗಿರುವ ಫರ್ನಿಚರ್ ಗಳ ಟ್ರೆಂಡಿ ಆಪ್ಶನ್ ಕೂಡ ಲಭ್ಯವಿದೆ.ಬೆಂಗಳೂರಿನಲ್ಲಿ ಒಂದು ಸ್ವಂತ, ಸುಂದರ ಮನೆ ಹೊಂದಬೇಕೆಂಬ ಆಸೆ ಇರುವ ಗ್ರಾಹಕರಿಗೆ ಈ 3 ದಿನಗಳ ಎಕ್ಸ್ ಪ್ರೊ ಬಹಳ ಸಹಾಯಕವಾಗಲಿದೆ.
ಇನ್ನು ಈ ರಿಯಲ್ ಎಸ್ಟೇಟ್ ಎಕ್ಸ್ ಪೋ ಕುರಿತು ಅತಿಥಿಗಳು ಒಬ್ಬೊಬ್ಬರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇನ್ನು ಈ ಎಕ್ಸ್ ಪೋ ಕುರಿತು ಗ್ರಾಹಕರು ಕೂಡ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ತಮಗೆ ಬೇಕಾದ ಪ್ರಾಪರ್ಟಿಯ ಜೊತೆಗೆ ಫರ್ನಿಚರ್ ಗಳು, ಟ್ರೆಂಡಿ ಆಪ್ಶನ್ ಗಳು, ಇರುವುದು ಗ್ರಾಹಕರಿಗೆ ಇನ್ನೂ ತೃಪ್ತಿದಾಯಕವಾಗಿದೆ. ಬೆಂಗಳೂರಿನಲ್ಲಿ ತಮ್ಮ ಹಣಕ್ಕೆ ಸರಿಯಾದ ಪ್ರಾಪರ್ಟಿಯನ್ನು ಹೊಂದಲು ಸಹಾಯಕವಾಗಿರುವ ಟಿವಿ9 ಹಾಗೂ ಇದಕ್ಕೆ ಮುಖ್ಯ ಕಾರಣಕರ್ತರಾಗಿರುವ ಪ್ರಾಪರ್ಟೀಸ್ ಹಾಗೂ ಫರ್ನಿಚರ್ ಕಂಪನಿಗಳು ಕೂಡ ಸಂತಸ ಹೊರ ಹಾಕಿದ್ದಾರೆ.
ಈ ಎಕ್ಸ್ ಪೋದಲ್ಲಿ ಭಾಗವಹಿಸಲು ಇನ್ನೂ ಒಂದು ದಿನಗಳ ಕಾಲ ಬಾಕಿ ಇದ್ದು.. ಕಡಿಮೆ ಬೆಲೆಯಲ್ಲಿ, ಹಾಗೂ ನಿಮ್ಮ ಹಣಕ್ಕೆ ತಕ್ಕನಾದ ನಿಮ್ಮ ಕನಸಿನ ಮನೆ ಹೊಂದಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.
ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.