10 ವರ್ಷ ಪ್ರೀತಿಸಿ ನಂತರ 2016ರಲ್ಲಿ ಹಸೆಮಣೆ ಏರಿದ ಸ್ಯಾಂಡಲ್ವುಡ್ ನ ರಾಕಿಂಗ್ ಕಪಲ್ ಏನು ಮಾಡಿದ್ರು ಕೂಡ ಅದು ಟ್ರೆಂಡ್ ಆಗುತ್ತೆ. ನಿಜ ಹೇಳ್ಬೇಕು ಅಂದ್ರೆ ಯಶ್ ಹಾಗೂ ರಾಧಿಕಾ ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ವಿಭಿನ್ನ ರೀತಿಯಲ್ಲಿ ಅವರ ವೈಯಕ್ತಿಕ ಜೀವನದ ಖುಷಿಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ರಾಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗಾಗಿ ಎಷ್ಟೋ ಅಭಿಮಾನಿಗಳು ಕಾತುರರಾಗಿ ಕಾಯುತ್ತಿರುತ್ತಾರೆ. ಇದರಂತೆ ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡದೆ ಅವರ ಮಕ್ಕಳ ಫೋಟೋಗಳು ಹಾಗೂ ಯಶ್ ಫೋಟೋಸ್ ಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಮತ್ತು ಹಬ್ಬ ಹರಿ ದಿನಗಳಿಗೆ ಅಭಿಮಾನಿಗಳಿಗೆ ಶುಭಾಶಯಗಳನ್ನ ಕೋರುತ್ತಿರುತ್ತಾರೆ.
ತಮ್ಮ ಮಕ್ಕಳ ಬೆಳವಣಿಗೆ ಹಾಗೂ ಯಶ್ ಮಕ್ಕಳ ಜೊತೆ ಹೇಗೆ ಆಟವಾಡುತ್ತಾರೆ ಎನ್ನುವ ಖುಷಿಯ ವಿಚಾರಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡುತ್ತಿರುತ್ತಾರೆ.
ಸದ್ಯ ಈ ದಂಪತಿ ವೆಕೇಶನ್ ಮೂಡ್ನಲ್ಲಿದ್ದು ಕಡಲ ತೀರದ ರೋಮ್ಯಾಂಟಿಕ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಯಶ್ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಫ್ಯಾಮಿಲಿ ಗೋಸ್ಕರ ಸಮಯ ಮೀಸಲಿಟ್ಟಿದ್ದಾರೆ . ಈ ದಂಪತಿ ಬೀಚ್ ಒಂದರ ಮುಂದೆ ಕುಳಿತು ಮಕ್ಕಳ ಜೊತೆ ಖುಷಿಯ ಕ್ಷಣಗಳನ್ನು ಹಂಚಿಕೊಂಡಿರುವ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇದನ್ನು ಕಂಡ ಅಭಿಮಾನಿಗಳು ಸಕ್ಕತ್ ಥ್ರಿಲ್ ಆಗಿದ್ದಾರೆ ಜೊತೆಯಲ್ಲಿ ಎಲ್ಲಾ ಕಡೆ ಈ ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟ ನಟಿಯ ಈ ಫೋಟೋಗಳಿಗೆ ಲಕ್ಷಾಂತರ ಲೈಕ್ಸ್, ಸಾವಿರಾರು ಕಮೆಂಟ್ಸ್ ಗಳ ಮಹಾಪೂರವೇ ಹರಿದು ಬಂದಿದೆ.
ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.